ಯೋಜನೆಯ ಪ್ರಮುಖ ಉದ್ದೇಶಗಳು

೧) ಖಾಸಗಿ ವಲಯದ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ದೊರಕಿಸಿಕೊಡುವುದು.

೨) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಾಮಾಜಿಕ ಹಾಗೂ ಆರ್ಥಿಕ ಜೀವನಮಟ್ಟವನ್ನು ಸುಧಾರಿಸುವುದು.

೩) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದನ್ನು ಉತ್ತೇಜಿಸಲು, ನೇಮಕಾತಿ ಮಾಡಿಕೊಂಡ ಸಂಸ್ಥೆಗಳಿಗೆ ಅಂತಹ ನೌಕರರ ಇ.ಎಸ್.ಐ. ಹಾಗೂ ಇ.ಪಿ.ಎಫ್. ವಂತಿಕೆಯನ್ನು ಮರು ಪಾವತಿಸುವ ಮೂಲಕ ಆರ್ಥಿಕ ಸಹಾಯ ನೀಡುವುದು.

೪) ತರಬೇತಿ ಪಡೆಯುವ ಅಪ್ರೆಂಟಿಸ್ಗಳಿಗೆ ಶಿಷ್ಯವೇತನ (Stipend) ಮಾಲೀಕರಿಗೆ ಮರುಪಾವತಿಸುವುದು.

ಯೋಜನೆಯ ಅನುಕೂಲಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಿರಿ

ಆಶಾದೀಪ ಯೋಜನೆಯ ಲಾಭಗಳು

ಮಾಲೀಕರು ಪಾವತಿಸುವ ಇ.ಎಸ್.ಐ. ಮತ್ತು ಇ.ಪಿ.ಎಫ್. ವಂತಿಕೆ ಮರುಪಾವತಿ:- ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಮಾಲೀಕರು/ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಬೇಕಾದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಇ.ಎಸ್.ಐ. ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಮಾಲೀಕರು/ ಉದ್ಯೋಗದಾತರಿಗೆ ಎರಡು ವರ್ಷಗಳ ಅವದಿ ವರೆಗೆ ಮಾಸಿಕ ಗರಿಷ್ಠ ತಲಾ ರೂ.೩೦೦೦/-ಗಳ ಮಿತಿಯೊಳಗೆ ಮರುಪಾವತಿ.


ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಶಿಷ್ಯವೇತನ (Stipend) ಮರುಪಾವತಿ:- ಒಂದು ವರ್ಷದ ಅವಧಿಯ ಸಾಮಾನ್ಯ (Normal) ಹಾಗೂ ಎರಡು ವರ್ಷಗಳ ಅವಧಿಯ ಸಮಗ್ರ (Comprehensive) ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ಶಿಪ್ ಕಾಯ್ದೆ, ೧೯೬೧ ರನ್ವಯ ಪಾವತಿಸಿದ ಮಾಸಿಕ ಶಿಷ್ಯವೇತನ (Stipend) ಮೊತ್ತದಲ್ಲಿ ೨/೩ ರಷ್ಟು ಮೊತ್ತವನ್ನು ಮಾಸಿಕ ತಲಾ ರೂ.೫೦೦೦/- ಗಳ ಮಿತಿಯೊಳಗೆ ಮರುಪಾವತಿ.


ಅಪ್ರೆಂಟಿಸ್ ತರಬೇತಿ ನಂತರ ಖಾಯಂ ಮಾಡಿದಲ್ಲಿ ವೇತನ ಮರುಪಾವತಿ:- ಅಪ್ರೆಂಟಿಸ್ ತರಬೇತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನೇ ಖಾಯಂ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಂಡಲ್ಲಿ, ಅಂತಹ ನೌಕರರಿಗೆ ಆಯಾ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ದರದಲ್ಲಿ ಶೇ.೫೦ ರಷ್ಟು ಮೊತ್ತವನ್ನು ಮಾಸಿಕ ಗರಿಷ್ಠ ತಲಾ ರೂ. ೭೦೦೦ /-ಗಳ ಮಿತಿಯೊಳಗೆ ಉದ್ಯೋಗದಾತರಿಗೆ ಒಂದು ವರ್ಷದ ಅವಧಿಗೆ ಮರುಪಾವತಿ ಮಾಡಲಾಗುತ್ತದೆ.

ಸಹಾಯವಾಣಿಗಳು ಮತ್ತು ಸಂಪರ್ಕ ಸಂಖ್ಯೆಗಳು
 • ಶ್ರೀ. ಅರ್ಬೈಲ್ ಹೆಬ್ಬರ್ ಶಿವ್ರಾಮ್
 • ಕೊಠಡಿ ಸಂಖ್ಯೆ 258-257 ಎ, ವಿಕಾಸ ಸೌಧ
 • 080-22259181
 • min-sugar@karnataka.gov.in
 • ಸೆಕ್ರೆಟರಿಯಟ್ ಕಚೇರಿ
 • ವಿಕಾಸ ಸೌಧ ಡಾ.ಅಂಬೇಡ್ಕರ್ ರಸ್ತೆ
 • 080 2225 4894
 • secy-labour@karnataka.gov.in
 • ಕಾರ್ಮಿಕ ಆಯುಕ್ತರು
 • ಕಲ್ಯಾಣ ಸುರಕ್ಷ ಭವನ
 • 080 2664 4312
 • ekarmikalabour@gmail.com
 • ಕೆಯು ಎಸ್ ಎಸ್ ಬಿ ಕಚೇರಿ
 • ಕಲ್ಯಾಣ ಸುರಕ್ಷ ಭವನ
 • 080 29759983
 • kuwssb@gmail.com
 • ಕಾರ್ಮಿಕ ಸಹಾಯವಾಣಿ
 • 155214
 • 9333333684
 • labourhelpline.karnataka.govt@gmail.com
ಟೋಲ್ ಫ್ರೀ ಸಂಖ್ಯೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

155214